Niet blij met je aankoop? Geeft niet! Bij ons kun je binnen 30 dagen retourneren
Met een cadeaubon zit je altijd goed. De ontvanger kan de cadeaubon voor alles uit ons assortiment inwisselen.
Retourneren binnen 30 dagen
ಸೂಕ್ಷ್ಮ ಕತೆಗಾರಿಕೆಯಿಂದ ಮತ್ತು ತನ್ನ ಕಾದಂಬರಿಗಳಿಂದ ಹೆಸರುವಾಸಿಯಾಗಿರುವ ಗುರುಪ್ರಸಾದ ಕಾಗಿನೆಲೆ ಅವರ ಕಥಾಸಂಕಲನವಿದು. ಅಮೆರಿಕ ಮತ್ತು ಭಾರತವೆರಡೂ ಸಮಾನ ಅವಕಾಶಗಳನ್ನು ಪಡೆಯುವ ಈ ಕತೆಗಳಲ್ಲಿ, ಎರಡೂ ಜಗತ್ತುಗಳನ್ನು ಹೊಸ ಕಣ್ಣುಗಳಿಂದ ನೋಡುವುದು ಸಾಧ್ಯವಾಗಿದೆ. ತನ್ನ ವೈದ್ಯಕೀಯ ಜಗತ್ತಿನ ಅನುಭವಗಳನ್ನೂ ಲೇಖಕರು ವಿವರವಾಗಿ ಪರಿಚಯಿಸುವುದರಿಂದ, ಮೂರನೆಯ ಜಗತ್ತಿನ ಅನಾವರಣವನ್ನೂ ಈ ಕತೆಗಳು ಮಾಡಿಕೊಡುತ್ತವೆ.
----------------------------------
'ಧರ್ಮಾರ್ಥ' ಕತೆಯಲ್ಲಿ ಶ್ರೀನಿವಾಸನ 'ಅರ್ಥ'ದ ಅಗತ್ಯಗಳು ಮತ್ತು ಲೌಕಿಕ ಸುಖಗಳು ಈಡೇರುವಂತಾದರೆ ಮಾತ್ರ ಅವನಿಂದ ತಮ್ಮ 'ಧರ್ಮ'ದ ಅಗತ್ಯಗಳು ಮತ್ತು ಪಾರಮಾರ್ಥಿಕ ಅಭಿಲಾಷೆಗಳು ಪೂರೈಸುತ್ತವೆ ಎಂಬ ತಿಳಿವಳಿಕೆಯಲ್ಲಿ ನಿರೂಪಕನು ಅರ್ಚಕನ ಅಗತ್ಯಗಳನ್ನು ಮನವರಿಕೆ ಮಾಡಿಕೊಂಡು ಅವನ್ನು ಈಡೇರಿಸಲು ಮುಂದಾಗುತ್ತಾನೆ. ಅಂದರೆ ನಿರೂಪಕ ಮತ್ತು ಅವನಂಥ ಭಾರತೀಯರಿಗೆ ಅಮೆರಿಕನ್ ಆವರಣದಲ್ಲಿ ತಮ್ಮ 'ಭಾರತೀಯತೆ'ಯನ್ನು ಹೇಗಾದರೂ ಉಳಿಸಿಕೊಳ್ಳಬೇಕಾಗಿದೆ. ಈಗಷ್ಟೇ ಭಾರತದಿಂದ ಅಮೆರಿಕಕ್ಕೆ ಬಂದಿರುವ ಅರ್ಚಕ ಶ್ರೀನಿವಾಸನಿಗೆ ಅಮೆರಿಕದ ಬದುಕಿನ ಸುಖಸೌಲಭ್ಯಗಳು ದೊರಕದೆ ಅವನು ಅಲ್ಲಿ ಇರಲಾರ. ಈ ದ್ವಂದ್ವವ್ಯಂಗ್ಯ 'ಧರ್ಮಾರ್ಥ'ದ ಅತ್ಯಂತ ಸ್ವಾರಸ್ಯಕರ ಅಂಶವಾಗಿದೆ.
-ಟಿ.ಪಿ. ಅಶೋಕ
----------------------------------
ದೇವರೆಂಬ ಸೂಕ್ಷ್ಮ ವಿಷಯದ ಕಥೆ ಹೇಳುವಾಗ ನೀವು ಸಾಧಿಸಿದ ಸಮಚಿತ್ತ ಅದ್ಭುತ. ಎಲ್ಲವನ್ನೂ ವ್ಯಂಗ್ಯವಾಗೇ ಹೇಳುತ್ತಿದ್ದೀರಿ ಅನ್ನಿಸಿದರೂ ನೀವು ಹೇಳುತ್ತಿಲ್ಲ. ತಮಾಷೆ ಅನ್ನಿಸುವ ಸನ್ನಿವೇಶಗಳನ್ನೂ ನೀವು 'ಇರುವ ಫ್ಯಾಕ್ಟ್ ಹೀಗೆ' ಎನ್ನುವಷ್ಟಕ್ಕೇ ಸೀಮಿತಗೊಳಿಸುತ್ತೀರಿ. (ಉದಾಹರಣೆಗೆ- ಪ್ರಹ್ಲಾದನ ಬೇಸ್ಮೆಂಟ್ ದೇವರ ಮನೆಯ ಕಥೆಯೇ ಆಗಲಿ, ಶ್ರೀನಿವಾಸನ ಚರ್ಚ್ ಗುಡಿಯ ವ್ಯಥೆಯೇ ಆಗಲಿ).
ಅದನ್ನೇನಾದರೂ ತಮಾಷೆ ಅಥವಾ ಅಪಹಾಸ್ಯದ 'ಟೋನ್'ನಲ್ಲಿ ನೀವು ಹೇಳಿದ್ದೇ ಆಗಿದ್ದರೆ ಕಥೆ ಬೇರೆಯದನ್ನೇ ಧ್ವನಿಸುತ್ತಿತ್ತು. ಇದು ಬಹು ಬುದ್ಧಿಮತ್ತೆಯ ನಾಜೂಕಿನ ಕಥೆಯ ಕುಸುರಿ.
-ಕರ್ಕಿ ಕೃಷ್ಣಮೂರ್ತಿ - 'ದೇವರ ರಜಾ' ಮತ್ತು 'ಧರ್ಮಾರ್ಥ' ಕತೆಯ ಬಗ್ಗೆ
----------------------------------
ಇಲ್ಲಿಯ ಬಹಳಷ್ಟು ಕತೆಗಳಲ್ಲಿ ಪಾತ್ರಗಳು ತಮ್ಮ ಸಹಪಾತ್ರಗಳ ಜೊತೆ
Hoi! Ik ben Libroamiko, je boekadviseur.
Hoe kan ik je helpen?